ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ನದಿಗೆ 5 ವರ್ಷದ ಹಿಂದೆ 17 ಕೋಟಿ ವೆಚ್ಚದಲ್ಲಿ ಐಗಳಕುರ್ವೆ ಸೇತುವೆ ನಿರ್ಮಿಸಲಾಗಿತ್ತು. ಆದ್ರೆ ಈವರೆಗೂ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸದೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಪರದಾಡುವಂತಾಗಿದೆ. ಕಲ್ಲಬ್ಬೆ, ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಗರಿಬೈಲ, ಉಪ್ಪಿನಪಟ್ಟಣ ಧಕ್ಕೆ ಮತ್ತು ಕೊಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಳಕುರ್ವೆಗೆ ಈ ಸೇತುವೆಯು ಸಂಪರ್ಕ ಕಲ್ಪಿಸುತ್ತದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರದ ಅವಧಿಯಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. 2 ವರ್ಷಗಳಲ್ಲಿ ಕಾಮಗಾರಿ ಮುಗಿದು ಜನರ ಓಡಾಟಕ್ಕೆ ಬಿಟ್ಟುಕೊಡಬೇಕಿತ್ತು. ಆದರೆ, ಅದರ ಸಂಪರ್ಕ ರಸ್ತೆ ನಿರ್ಮಾಣ ಮಾತ್ರ ಹಾಗೇ ಉಳಿದಿದೆ. ಬೊಗರಿಬೈಲ ಗ್ರಾಮಸ್ಥರು ಸುಮಾರು 25 ಸಾವಿರ ವೆಚ್ಚದಲ್ಲಿ ತಾವೇ ಶ್ರಮದಾನ ಮೂಲಕ ಸೇತುವೆಯ ಎರಡೂ ಬದಿಗೆ ಅಡಿಕೆ ಮರದ ಸುಂಕ ನಿರ್ಮಿಸಿದ್ದಾರೆ. ಸೇತುವೆ ಬಳಸಿ ಸಂಪರ್ಕಿಸಬಹುದಾಗಿದ್ದ ನಾಲ್ಕಾರು ಕಿ.ಮೀ. ಅಂತರದ ಗ್ರಾಮಗಳಿಗೆ 25 ಕಿ.ಮೀ ಸುತ್ತುವರಿದು ಹೋಗಬೇಕಿದೆ. ಈ ಹಿಂದೆ ಪಬ್ಲಿಕ್ ಟಿವಿ ಸುದ್ದಿ ಪ್ರಸಾರವಾಗಿದ್ದ ವೇಳೆ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು, ಅಂದಿನ ಸಚಿವರು ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರನ್ನ ಕೇಳಿದ್ರೆ... 100ಕ್ಕೆ 100 ಕೆಲಸ ಮಾಡಿಕೊಟ್ಟರೆ ಜನಮರೆತು ಹೋಗ್ತಾರೆ.. ಮತ್ತೆ ನಮ್ಮನ್ನೇ ಗೆಲ್ಲಿಸಬೇಕು.. ಹೀಗಾಗಿ ಶೇ.15ರಷ್ಟು ಕಾಮಗಾರಿ ಹಾಗೇ ಇಟ್ಟುಕೊಂಡಿದ್ದೇನೆ ಅಂತ ಉದ್ಧಟತನದ ಹೇಳಿಕೆ ಕೊಡ್ತಾರೆ.
#PublicTV #Karwar